ಸುಸ್ವಾಗತ

ಕನ್ನಡ ಸಂಘ ಹಾಂಗ್ ಕಾಂಗ್


ಆತ್ಮೀಯ ಬಂಧುಗಳೆ,
ನಿಮ್ಮೆಲ್ಲರಿಗೂ ಕನ್ನಡ ಸಂಘ ಹಾಂಗ್ ಕಾಂಗ್ ನ "ರಂಗ-ಪುಟ" ಕ್ಕೆ ಆದರದ ಸ್ವಾಗತ. ಭಾರತ ಹಲವು ಕಲೆ ಹಾಗೂ ಸಂಸ್ಕೃತಿಯ ತವರೂರು. ಪ್ರತಿಯೊಂದು ರಾಜ್ಯವು ತನ್ನ ವಿಶಿಷ್ಟ ನಿಪುಣತೆಯೊಂದಿಗೆ ಈ ಕಲಾ ಸಂಸ್ಕೃತಿಯ ಬೆಳೆಯಲ್ಲಿ ಸೇರ್ಪಡೆಯಾಗಿ ತಮ್ಮದೇ ಆದ ರೀತಿಯಲ್ಲಿ ಭಾರತದ ಗರಿಮೆಗೆ ಕಾರಣವಾಗಿದೆ. ಇದರಲ್ಲಿ ಕರ್ನಾಟಕದ ಪಾತ್ರ ಮಹತ್ತರವಾದದ್ದು. ಐತಿಹಾಸಿಕ ಹಾಗೂ ನವ ಸಮಾಜದ ನಿರ್ಮಾಣದಲ್ಲಿ ಮಂಚೂಣಿಯ ಪಾತ್ರವನ್ನು ವಹಿಸಿದೆ. ಕರ್ನಾಟಕದ ಈ ಹಿರಿಮೆಗೆ ಕಾರಣವಾದ ಕಲೆ, ಸಾಹಿತ್ಯ, ಸಂಗೀತದ ಸೌರಭವನ್ನು ಹಾಂಗ್ ಕಾಂಗ್ ಹಾಗೂ ಅದರ ಸುತ್ತಮುತ್ತ ನೆಲೆಸಿರುವ ಕನ್ನಡ ಬಾಂಧವರೊಂದಿಗೆ ಹಂಚಿಕೊಂಡು "ನಮ್ಮತನ" ದ ಅರಿವನ್ನು ಜಾಗೃತಗೊಳಿಸುವುದೇ ಈ ಸಂಘದ ಮೂಲೋದ್ದೇಶ. ಈ ದಿಕ್ಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಘ ವಿವಿಧ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಸಂಘದಲ್ಲಿ ಹಿಂದೆ ನಡೆದಿರುವ ಹಾಗೂ ಮುಂದೆ ನಡೆಯುವ ಚಟುವಟಿಕೆಗಳು, ಕಾರ್ಯಕ್ರಮದ ವಿವರಗಳು, ಸ್ಥಿರಚಿತ್ರಗಳು, ನಮ್ಮ ಪ್ರಮುಖ ಸಾಧನೆಗಳು, ಇವೆಲ್ಲದರ ಕೈಪಿಡಿ ಈ ಕೆ.ಎಸ್.ಎಚ್.ಕೆ "ರಂಗಪುಟ". ಕನ್ನಡ ಮಿತ್ರರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಂಘದ ಬಗ್ಗೆ ತಮ್ಮ ಬಂಧು-ಮಿತ್ರರಿಗೆ ತಿಳಿಯಪಡಿಸುವಿರೆಂದು ಆಶಿಸಿತ್ತೇವೆ ಬನ್ನಿ, ಸಾಗರಾದಚೆಯ ನಾಡಿನಲ್ಲಿರುವ ನಾವು ಈ ಸಂಘದ ಮೂಲಕ ಸ್ನೇಹಿತರಾಗಿ ಎಲ್ಲರೊಡನೆ ಬೆರೆತು ಈ ಸಂಘವನ್ನು ಮತ್ತಷ್ಟು ಬಲಪಡಿಸಿ ಬೆಳೆಸೋಣ.